Image

ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್

ಕೆಂಗೇರಿ ಉಪನಗರ , ಬೆಂಗಳೂರು - 60
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಶಾಶ್ವತವಾಗಿ ಸಂಯೋಜಿತವಾಗಿದೆ

ನ್ಯಾಕ್ ನಿಂದ 'ಬಿ' ಮಾನ್ಯತೆ ಪಡೆದಿದೆ

ಕಾಲೇಜು ಅವಲೋಕನ

ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್‌ಗೆ ಸುಸ್ವಾಗತ

ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಡಿಯಲ್ಲಿ (೩೨) ಮುವತ್ತೆರಡು ಅಂಗ ಸಂಸ್ಥೆಗಳಿದ್ದು, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಂಗಸಂಸ್ಥೆಗಳಲ್ಲಿ, ಶೇಷಾದ್ರಿಪುರಂ ಅಕಾಡೆಮಿ ಆಫ್ ಬ್ಯುಸಿನೆಸ್ ಸ್ಟಡೀಸ್ ಕೂಡ ಒಂದು ಶಾಖೆಯಾಗಿದೆ. ಇದು ಕೆಂಗೇರಿ ಉಪನಗರದ ಪ್ರಮುಖ ಸ್ಥಳದಲ್ಲಿದೆ. ಸದೃಢ ಸಮಾಜವನ್ನು ನಿರ್ಮಿಸಲು, ಸರಿಯಾದ ಸೌಲಭ್ಯ ಒದಗಿಸಲು, ಕಾಲೇಜಿನಲ್ಲಿ ವಿವಿಧ ಸಮಿತಿ ಗಳ ಮೂಲಕ ಪಠ್ಯ ಮತ್ತು ಪಠ್ಯೇತ್ತರ ಚಟುವಟಿಕೆಗಳಿಗೆ ಸಮಾನ ಒತ್ತು ನೀಡಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಹೊಂದುವ ಗುರಿಯನ್ನು ಕಾಲೇಜು ಹೊಂದಿದ್ದು, ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸದೃಢಗೊಳಿಸುವುದರ ಜೊತೆಗೆ ಅವರನ್ನು ಸಾಮಾಜಿಕ ಜವಾಬ್ದಾರಿಯುತ ಪ್ರಜೆಯನ್ನಾಗಿಸುವ ಪರಮ ಉದ್ದೇಶವನ್ನೂ ಹೊಂದಿದೆ. ಜಾಗತೀಕರಣಗೊಂಡ ಪರಿಸರದ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉತ್ತೇಜಕ ಬೋಧನಾ ಕಲಿಕಾ ವಾತಾವರಣವನ್ನು ಸೃಷ್ಟಿಸಲು ಕಾಲೇಜು ಪ್ರಯತ್ನಿಸುತ್ತದೆ. ಇದು ತನ್ನ ಎಲ್ಲಾ ವಿದ್ಯಾರ್ಥಿ ಸಮುದಾಯದೊಂದಿಗೆ ಬೆಚ್ಚಗಿನ, ಸೌಹಾರ್ದಯುತ ಮತ್ತು ಪರಸ್ಪರ ಬೆಂಬಲದ ಸಂಬಂಧವನ್ನು ಬೆಳೆಸಲು ಶ್ರಮಿಸುತ್ತದೆ.

ಕೆಂಗೇರಿ ಉಪನಗರದಲ್ಲಿ ನೆಲೆಗೊಂಡಿರುವ ಈ ಕಾಲೇಜು ಅದರ ಸುತ್ತಮುತ್ತಲಿನ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿದ್ದು, ಇದು ಕೆಂಗೇರಿಯಲ್ಲಿ ಹೆಚ್ಚು ಬೇಡಿಕೆಯಿರುವ ಕಾಲೇಜುಗಳಲ್ಲಿ ಒಂದಾಗಿದೆ. ಕಾಲೇಜು ಮೂಲಸೌಕರ್ಯ, ವಿವಿಧ ವೇದಿಕೆಗಳು, ಸಮಿತಿಗಳು, ಸಕ್ರಿಯ ವಿದ್ಯಾರ್ಥಿ - ಶಿಕ್ಷಕರ ಸಂವಾದವು ಕಾಲೇಜಿಗೆ ಹಲವಾರು ಪುರಸ್ಕಾರಗಳನ್ನು ತಂದು ಕೊಟ್ಟಿದೆ. ಕಾಲೇಜಿನ ನಿಯೋಜಿತ ಕಾರ್ಯಕ್ರಮಗಳು ಅದರ ಪ್ರಮುಖ ಗಮನವಾಗಿದೆ. ಪದವಿ ಪಡೆದ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ವೇತನದೊಂದಿಗೆ ಬೇರೆ-ಬೇರೆ ಹೆಸರಾಂತ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಈ ಸತ್ಯಕ್ಕೆ ಸಾಕ್ಷಿಯಾಗಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಹೊತ್ತಿಗೆ, ಅವರ ವೃತ್ತಿಜೀವನಕ್ಕೆ ಅಗತ್ಯವಿರುವ ಸಾಕಷ್ಟು ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಅವರನ್ನು ಸಿದ್ದಗೊಳಿಸಿ, ಹೆಚ್ಚಿನ ಆತ್ಮವಿಶ್ವಾಸದಿಂದ ಜೀವನದ ಸವಾಲುಗಳನ್ನು ಎದುರಿಸುವ ಸದ್ಗುಣಶೀಲ ನಾಗರಿಕರನ್ನಾಗಿ ಮಾಡುತ್ತೇವೆ.

ದೃಷ್ಟಿಕೋನ

ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ರಾಷ್ಟ್ರ ನಿರ್ಮಾತೃಗಳಾಗಿ ಬೆಳೆಯಲು ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಗೊಳಿಸುವ ಶಿಕ್ಷಣವನ್ನು ನೀಡುವುದು.

ಉದ್ದೇಶಗಳು

ಮಾನವೀಯ ಮೌಲ್ಯಗಳನ್ನು ಬೆಳೆಸಿ, ವೃತ್ತಿಪರ ವಿವೇಕ, ಜಿಜ್ಞಾಸೆಯನ್ನು ನಡೆಸಿ ಅಗತ್ಯ ಪ್ರೇರಣೆಯ ಮೂಲಕ ಕಲಿಕೆಗೆ ಚಾಲನೆಯನ್ನು ನೀಡುವುದು.

ಗುರಿ

ಶ್ಲಾಘನೀಯ ಶೈಕ್ಷಣಿಕ ಭದ್ರಕೋಟೆಯಾಗಿ ಬೆಳಗುವ ಸಮಾಜವನ್ನು ಕಟ್ಟಿಕೊಡುವುದು.

ಘೋಷವಾಕ್ಯ

ಉತ್ಕೃಷ್ಟತೆಗೆ ಸಮರ್ಪಿಸಲಾಗಿದೆ.

ಮೂಲ ಮೌಲ್ಯಗಳು

  • ಶ್ರೇಷ್ಠತೆ
  • ಸೇವೆ
  • ಪರಿಸರ ಕಾಳಜಿ
  • ಸಾಮಾಜಿಕ ಜವಾಬ್ದಾರಿ

ಗುಣಮಟ್ಟ ನೀತಿ

ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುವ ದೃಷ್ಟಿಯಿಂದ, ನಿಖರವಾದ ಯೋಜನೆ ಮತ್ತು ಅದರ ಅನುಷ್ಠಾನದ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು.

X